ಚತುರ್ಥ ನವಾವರಣ ಕೃತಿ
ಕಮಲಾಂಬಿಕಾಯೈ ರಾಗ: ಕಾಂಭೋಜಿ ತಾಳ: ಅಟ್ಟತಾಳ
ಕಮಲಾಂಬಿಕಾಯೈ ಕನಕಾಂಶುಕಾಯೈ | ಕರ್ಪೂರ ವೀಟಿಕಾಯೈ ನಮಸ್ತೇ ನಮಸ್ತೇ ||
ಕಮಲಾ ಕಾಂತಾನುಜಾಯೈ ಕಾಮೇಶ್ವರ್ಯೈ ಅಜಾಯೈ |
ಹಿಮಗಿರಿ ತನುಜಾಯೈ ಹ್ರೀಂಕಾರ ಪೂಜ್ಯಾಯೈ ||
ಕಮಲಾ ನಗರ ವಿಹಾರಿಣ್ಯೈ | ಖಲ ಸಮೂಹ ಸಂಹಾರಿಣ್ಯೈ |
ಕಮಣೀಯ ರತ್ನ ಹಾರಿಣ್ಯೈ | ಕಲಿಕಲ್ಮಷ ಹಾರಿಣ್ಯೈ ||
ಸಕಲ ಸೌಭಾಗ್ಯದಾಯೈ | ಕಾಂಭೋಜ ಚರಣಾಯೈ |
ಸಂಕ್ಷೋಭಿಣ್ಯಾಧಿ ಶಕ್ತಿಯುತ ಚತುರ್ಥ ಆವರಾಣಾಯೈ |
ಪ್ರಕಟ ಚತುರ್ದಶ ಭುವನ ಭರಣಾಯೈ |
ಪ್ರಬಲ ಗುರುಗುಹ ಸಂಪ್ರದಾಯಾಂತಃ ಕರಣಾಯೈ |
ಅಕಳಂಕ ರೂಪ ವರ್ಣಾಯೈ ಅಪರ್ಣಾಯೈ ಸುಪರ್ಣಾಯೈ |
ಸುಕರದೃತ ಛಾಪಬಾಣಾಯೈ | ಶೋಭನಕರ ಮನುಕೋಣಾಯೈ ||
ಸಕುಂಕುಮಾದಿ ಲೇಪನಾಯೈ | ಚರಾಚರಾದಿ ಕಲ್ಪನಾಯೈ |
ಚಿಕುರ ವಿಜಿತ ನೀಲ ಘನಾಯೈ | ಚಿದಾನಂದ ಪೂರ್ಣ ಘನಾಯೈ ||
ಕಾಂಭೋಜಿ ರಾಗದ ಕಮಲಾಂಬಿಕಾಯೈ ಈ ಕೃತಿಯು ಕಮಲಾಂಬಾ ನವಾವರಣದ ಚತುರ್ಥ ಆವರಣ ಕೃತಿಯಾಗಿದೆ. ಚತುರ್ಥಿ ವಿಭಕ್ತಿಯಲ್ಲಿದೆ. ಆವರಣದ ಹೆಸರು ಸರ್ವಸೌಭಾಗ್ಯದಾಯಕ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರವಾಸಿನಿ. ಯೋಗಿನಿಯ ಹೆಸರು ಸಂಪ್ರದಾಯ ಯೋಗಿನಿ.
ಶ್ರೀಚಕ್ರದ ನಾಲ್ಕನೆಯ ಆವರಣವಾದ ಇದು ಹದಿನಾಲ್ಕು ತ್ರಿಕೋಣಗಳಿಂದ ಕೂಡಿದೆ. ಆ ಹದಿನಾಲ್ಕು ತ್ರಿಕೋಣಗಳ ಹೆಸರು ಇಂತಿವೆ.
ಸರ್ವಸಂಕ್ಷೋಭಿಣಿ, ಸರ್ವವಿದ್ರಾವಿಣಿ, ಸರ್ವಾಕರ್ಷಿಣಿ, ಸರ್ವಾಹ್ಲಾದಿನಿ, ಸರ್ವಸಮ್ಮೋಹಿನಿ, ಸರ್ವಸ್ತಂಭಿಣಿ, ಸರ್ವಜೃಂಭಿಣಿ, ಸರ್ವವಶಂಕರಿ, ಸರ್ವರಂಜನಿ, ಸರ್ವೋನ್ಮಾದಿನಿ, ಸರ್ವಾರ್ಥಸಾಧಿಕೆ, ಸರ್ವಸಂಪತ್ತಿಪೂರಣ, ಸರ್ವಮಂತ್ರಮಯೀ, ಸರ್ವದ್ವಂದ್ವಕ್ಷಯಕರೀ.
ಪಲ್ಲವಿಯಲ್ಲಿಯೆ ಕರ್ಪೂರ ವೀಟಿಕಾ ಎಂಬ ಲಲಿತಾ ಸಹಸ್ರನಾಮದ 26ನೆ ನಾಮವನ್ನು ಬಳಸಿಕೋಳ್ಳಲಾಗಿದೆ.
ಚರಣದಲ್ಲಿ ಮೊದಲ ಸಾಲಿನಲ್ಲಿ ಸಕಲ ಸೌಭಾಗ್ಯದಾಯಕಾಂಭೋಜ ಚರಣಾಯೈ ಎಂಬಲ್ಲಿ ಆವರಣ ಚಕ್ರದ ನಾಮದೊಂದಿಗೆ ರಾಗಮುದ್ರೆಯನ್ನು ಸುಲಲಿತವಾಗಿ ಪೋಣಿಸಲಾಗದೆ. ಈ ಚಕ್ರದಲ್ಲಿರುವ ಹದಿನಾಲ್ಕು ತ್ರಿಕೋಣಗಳನ್ನು ಹದಿನಾಲ್ಕು ಲೋಕಗಳಿಗೆ ದೀಕ್ಷಿತರು ಹೋಲಿಸಿದ್ದಾರೆ. ಲಲಿತಾಸಹಸ್ರನಾಮವಾದ ಅಪರ್ಣಾ, ಲಲಿತಾ ತ್ರಿಶತಿಯ ಸಕುಂಕುಮದಿ ಲೇಪನಾ ಎಂಬ ನಾಮಗಳು ಕೃತಿಯ ಘನತೆಯನ್ನು ಇಮ್ಮಡಿಗೊಳಿಸಿದೆ. ಕೃತಿಯನ್ನು ಗಮನಿಸಿದರೆ ಎಲ್ಲಾ ಪದವು ಯೈ ಎಂದು ಕೊನೆಗೊಳ್ಳುತ್ತದೆ. ಇದೂ ಕೃತಿಯ ಸೊಗಸಿಗೊಂದು ಹಿಡಿದ ಕನ್ನಡಿಯಾಗಿದೆ.
No comments:
Post a Comment