ತೃತೀಯ ನವಾವರಣ ಕೃತಿ
ಶ್ರೀಕಮಲಾಂಬಿಕಯಾ ಕಟಾಕ್ಷಿ ತೋಹಂ ರಾಗ: ಶಂಕರಾಭರಣ ತಾಳ: ರೂಪಕ ತಾಳ
ಶ್ರೀ ಕಮಲಾಂಬಿಕಯಾ ಕಟಾಕ್ಷಿತೋಹಂ | ಸಚ್ಚಿದಾನಂದ ಪರಿಪೂರ್ಣ ಬ್ರಹ್ಮಾಸ್ಮಿ ||
ಪಾಕಾಶಾಸನಾದಿ ಸಕಲ ದೇವತಾ ಸೇವಿತಯಾ | ಪಂಕಜಾಸನಾದಿ ಪಂಚಕೃತ್ಯ ಕೃತ್ ಭಾವಿತಯಾ ||
ಕೋಕಹರ ಚತುರಪದಯಾ | ಮೂಕ ವಾಕ್ಯವಾಕ್ ಪ್ರದಯಾ |
ಕೋಕನದ ವಿಜಯ ಪದಯಾ | ಗುರುಗುಹ ತತ್ರೈ ಪದಯಾ ||
ಅನಂಗ ಕುಸುಮಾದ್ಯಷ್ಟ ಶಕ್ತ್ಯಾ ಕಾರಯಾ | ಅರುಣ ವರ್ಣ ಸಂಕ್ಷೋಭಣ ಚಕ್ರ ಕಾರಯಾ |
ಅನಂತ ಕೋಟ್ಯಂಡ ನಾಯಕ ಶಂಕರ ನಾಯಿಕಯಾ | ಅಷ್ಟವರ್ಗಾತ್ಮಕ ಗುಪ್ತತರಯಾ ವರಯಾ ||
ಅನಂಗಾದ್ಯುಪಾಸಿತಯಾ | ಅಷ್ಟದಳಾಬ್ಜ ಸ್ಥಿತಯಾ |
ಧನುರ್ಭಾಣಧರಕರಯಾ ದಯಾ ಸುಧಾ ಸಾಗರಯಾ ||
ಶ್ರೀ ಕಮಲಾಂಬಾ ನವಾವರಣದ ಮೂರನೇ ಕೃತಿಯಾದ ಶಂಕರಾಭರಣ ರಾಗದ ಶ್ರೀ ಕಮಲಾಂಬಿಕಯಾ ಕಟಾಕ್ಷಿತೊಹಂ ಮೂರನೇ ವಿಭಕ್ತಿಯಲ್ಲಿದೆ. ಈ ಆವರಣದ ಚಕ್ರದ ಹೆಸರು ಸರ್ವಸಂಕ್ಷೋಭಣ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರಸುಂದರಿ, ಯೋಗಿನಿಯಹೆಸರು ಗುಪ್ತತರ ಯೋಗಿನಿ. ಈ ಕೃತಿಯು ಶ್ರೀ ಚಕ್ರದ ಮೂರನೆಯ ಆವರಣದ ಅಷ್ಟ ಕಮಲದಳವನ್ನು ಸಂಭೋಧಿಸುತ್ತದೆ. ಆ ಅಷ್ಟ ಕಮಲದಳಗಳ ಹೆಸರು ಇಂತಿವೆ.
ಅನಂಗ ಕುಸುಮಾ, ಅನಂಗ ಮೇಖಲಾ, ಅನಂಗ ಮದನಾ, ಅನಂಗ ಮದನಾತುರಾ, ಅನಂಗ ರೇಖಾ, ಅನಂಗ ವೇಗಿನಿ, ಅನಂಗಾಮಕುಶ, ಅನಂಗಮಾಲಿನಿ.
ದೀಕ್ಷಿತರ ಸಾಹಿತ್ಯ ಜ್ಞಾನ ಯಾವ ರೀತಿ ಇದೆ ಎಂದು ಈ ಕೃತಿಯ ಪದಭಂಡಾರವನ್ನು ನೋಡಿದಾಗ ತಿಳಿಯುತ್ತದೆ. ‘ಪಂಕಜಾಸನಾದಿ ಪಂಚಕೃತ್ಯ ಕೃತ್ ಭಾವಿತಯಾ’, ‘ಅನಂಗ ಕುಸುಮಾದ್ಯಷ್ಟ ಶಕ್ತ್ಯಾ ಕಾರಯಾ’,’ಅನಂತ ಕೋಟ್ಯಂಡ ನಾಯಕ ಶಂಕರ ನಾಯಿಕಯಾ’, ‘ಅನಂಗಾದ್ಯುಪಾಸಿತಯಾ’, ‘ಧನುರ್ಭಾಣಧರಕರಯಾ’ ಮುಂತಾದ ನಾಮಗಳು ಯಾವ ಲಲಿತಾ ಸಹಸ್ರನಾಮ, ಲಲಿತಾತ್ರಿಶತೀಗೂ ಕಡಿಮೆಯಿಲ್ಲದಂತಿದೆ. ಇಲ್ಲಿ ರಾಗ ಮದ್ರೆಯನ್ನು ದೀಕ್ಷಿತರು ಸಾಹಿತ್ಯಭಾವಕ್ಕೆ ದಕ್ಕೆಯಾಗದಂತೆ ಶಂಕರ ನಾಯಿಕಯಾ(ಶಂಕರಾಭರಣ) ಎಂದು ಬಹಳ ಜಾಣ್ಮೆಯಿಂದ ಬಳಸಿಕೊಂಡಿದ್ದಾರೆ ಎನಿಸುತ್ತದೆ. ನಾವು ಶ್ರೀ ಕಮಲಾಂಬೆಯನ್ನು ದುರಿತವ ದೂರಿಕರಿಸು ಎಂದು ಭಕ್ತಿಯಿಂದ ಬೇಡಿಕೊಳ್ಳೋಣ.
No comments:
Post a Comment