ಶ್ರೀ ಕಮಲಾಂಬಾ ಜಯತಿ ಅಂಬಾ
ರಾಗ: ಆಹಿರಿ ತಾಳ: ತ್ರಿಶ್ರ ಏಕತಾಳನವಮ ಆವರಣ ಕೃತಿ
ಶ್ರೀ ಕಮಲಾಂಬಾ ಜಯತಿ ಅಂಬಾ | ಶ್ರೀ ಕಮಲಾಂಬಾ ಜಯತಿ ಜಗದಂಬಾ
ಶ್ರೀ ಕಮಲಾಂಬಾ ಜಯತಿ ಶೃಂಗಾರ ರಸ ಕದಂಬಾ ಮದಾಂಬಾ |
ಶ್ರೀ ಕಮಲಾಂಬಾ ಜಯತಿ ಚಿತ್‍ಬಿಂಬಾ ಪ್ರತಿಬಿಂಬೇಂದು ಬಿಂಬಾಶ್ರೀ ಕಮಲಾಂಬಾ ಜಯತಿ ||
ಶ್ರೀಪುರಬಿಂದು ಮಧ್ಯಸ್ಥ ಚಿಂತಾಮಣಿ ಮಂದಿರಸ್ಥ | ಶಿವಾಕಾರ ಮಂಚಸ್ಥಿತ ಶಿವಕಾಮೇಶಾಂಕಸ್ಥ ||
ಸೂಕರನಾನದ್ಯರ್ಚಿತ ಮಹಾತ್ರಿಪುರಸುಂದರೀಂ ರಾಜೇಶ್ವರೀಂ |
ಶ್ರೀಕರ ಸರ್ವಾನಂದಮಯ ಚಕ್ರವಾಸಿನೀಂ ಸುವಾಸಿನೀಂ ಚಿಂತಯೇ ಹಂ ||
ದಿವಾಕರ ಶೀತ ಕಿರಣ ಪಾವಕಾದಿ ವಿಕಾಸ ಕರಯಾ | ಭೀಕರ ತಾಪತ್ರಯಾದಿ ಭೇದನ ಧುರೀಣ ತರಯಾ |
ಪಾಕರಿಪು ಪ್ರಮುಖಾದಿ ಪ್ರಾರ್ಥಿತ ಸುಕಳೇಬರಯಾ | ಪ್ರಾಕಟ್ಯ ಪರಾಪರಯಾ ಪಾಲಿತೋದಯಾಕರಯಾ ||
ಶ್ರೀಮಾತ್ರೇ ನಮಸ್ತೇ ಚಿನ್ಮಾತ್ರೇ ಸೇವಿತ ರಮಾಹರಿಕಾ ವಿಧಾತ್ರೇ | ವಾಮಾದಿ ಶಕ್ತಿ ಪೂಜಿತ ಪರದೇವತಾಯಾ ಸಕಲ ಜಾತಂ |
ವಾಮಾದಿ ದ್ವಾದಶಭಿರುಪಾಸಿತ | ಕಾದಿ ಹಾದಿ ಸಾದಿ ಮಂತ್ರ ರೂಪಿಣ್ಯಃ |
ಪ್ರೇಮಾಸ್ಪದ ಶಿವಗುರುಗುಹ ಜನನ್ಯಾಂ | ಪ್ರೀತಿಯುಕ್ತ ಮಚ್ಚಿತ್ತಂ ವಿಲಯತುಂ |
ಬ್ರಹ್ಮಮಯ ಪ್ರಕಾಶಿನೀ ನಾಮರೂಪ ವಿಮರ್ಶಿನೀ | ಕಾಮಕಲಾ ಪ್ರದರ್ಶಿನೀ ಸಾಮರಸ್ಯ ನಿದರ್ಶಿನೀ ||
ಶ್ರೀ ಕಮಲಾಂಬಾ ಜಯತಿ ಕೃತಿಯು ಸಂಬೋಧನಾ ವಿಭಕ್ತಿ ಬಿಟ್ಟು ಬೇರೆ ಎಲ್ಲಾ ವಿಭಕ್ತಿಗಳಲ್ಲೂ ಇವೆ. ಈ ಒಂಬತ್ತನೇ ಆವರಣದ ಬಿಂದುವಿನ ಹೆಸರು ಸರ್ವಾನಂದಮಯ ಚಕ್ರ. ಚಕ್ರೇಶ್ವರಿಯ ಹೆಸರು ಮಹಾತ್ರಿಪುರ ಸುಂದರಿ. ಯೋಗಿನಿಯ ಹೆಸರು ಪರಾಪರ ರಹಸ್ಯಯೋಗಿನಿ.
ದೀಕ್ಷಿತರು ಈ ಕೃತಿಯ ಪಲ್ಲವಿಯಲ್ಲಿ ಶ್ರೀ ಕಮಲಾಂಬಾ ಜಯತಿ ಎಂದು ಐದು ಸಲ ಬಳಸಿದ್ದಾರೆ. ಕಮಲಾಂಬೆಯ ಜಯವನ್ನು ಆನಂದಿಂದ ಹೇಳುತ್ತಾ ಶೃಂಗಾರ ರಸಸಂಪೂರ್ಣಳಾದ ಚಂದ್ರಬಿಂಬದಲ್ಲಿಯೂ, ಪ್ರತಿಬಿಂಬದಲ್ಲಿಯೂ ವಾಸವಾಗಿರುವ ದೇವಿಯನ್ನು ಸ್ತುತಿಸುತ್ತಾ, ಶ್ರೀಚಕ್ರದ ಬಿಂದು ಮಧ್ಯದಲ್ಲಿರುವ ಚಿಂತಾಮಣಿಗ್ರಹದಲ್ಲಿ ವಾಸಿಸುವ, ಶಿವರೂಪದ ಮಂಚದಲ್ಲಿರುವ ಶಿವಕಾಮೇಶ್ವರನ ತೊಡೆಯ ಮೇಲೆ ಕುಳಿತಿರುವ ದೇವಿಯು ಜಯಶೀಲೆ ಎಂದಿದ್ದಾರೆ.
ಅನುಪಲ್ಲವಿಯಲ್ಲಿ ವರಾಹಸ್ವರೂಪಿ ಮಹಾವಿಷ್ಣುವಿನಿಂದ ಅರ್ಚಿತಳಾದ ಮಹಾತ್ರಿಪುರಸುಂದರಿಯಾದ ರಾeರಾಜೇಶ್ವರಿ, ಸೂರ್ಯ, ಚಂದ್ರ, ಅಗ್ನಿ ಮೊದಲಾದ ತೇಜೋರೂಪಿಗಳಿಗೂ ಪ್ರಕಾಶ ನೀಡುª,À ಭಯಂಕರ ತಾಪತ್ರಯಗಳನ್ನು ನಿವಾರಿಸುವ, ಇಂದ್ರಾದಿ ದೇವತೆಗಳಿಗಳಿಂದ ಪ್ರಾರ್ಥಿಸಲ್ಪಡುವ, ಸುಂದರ ಶರೀರವುಳ್ಳ, ಪರಾಪÀರಗಳನ್ನು ಪ್ರಕಟಿಸುವ, ದಯಾಸುಧಾಸಾಗರಳಾದ ಕಮಲಾಂಬಿಕೆಯಿಂದ ಪಾಲಿಸಲ್ಪಟ್ಟಿದ್ದೇನೆ.
ಚರಣದಲ್ಲಿ ರಮಾಹರಿಕಾ ಎಂದು ರಾಗದ ಹೆಸರು ಆಹಿರಿಯನ್ನು ಅತಿ ಜಾಣ್ಮೆಯಿಂದ ಜೋಡಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ವಾಮಾಚಾರ ಪೂಜಾ ಸಂಕೇತ. ದೀಕ್ಷಿತರು ಶ್ರೀ ಮಹಾತ್ರಿಪುರ ಸುಂದರಿ ದೇವಿಯು ವಾಮಾಚಾರ ಪೂಜಾ ಪದ್ಧತಿಯಲ್ಲೂ ಪೂಜಿಸಲ್ಪಡುವವಳು ಎಂದಿದ್ದಾರೆ. ಶ್ರೀ ಕಮಲಾಂಬಿಕೆಯು ದ್ವಾದಶಭಿರುಪಾಸಿತೆ ಎಂಬಲ್ಲಿ ಮನ್ಮಥನಿಂದೊಡಗೂಡಿ ಹನ್ನೆರಡು ಮಂದಿ ಶ್ರೀವಿದ್ಯಾ ಉಪಾಸಕರಿಂದ ಪೂಜಿಸಲ್ಪಡುವವಳು ಎಂದಿದ್ದಾರೆ. ಅಲ್ಲದೆ ಕಾದಿ-ಹಾದಿ-ಸಾದಿ ಮಂತ್ರಸ್ವರೂಪಳಾದ ಜಗದಂಬೆಯ ಪ್ರೇಮಕ್ಕೆ ಪಾತ್ರನಾದ ಷಣ್ಮುಖನ ಜನನಿಯಲ್ಲಿ ನನ್ನ ಮನಸ್ಸು ನೆಲೆಗೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
No comments:
Post a Comment