ಕರ್ನಾಟಕ ಸಂಗೀತದ ವಾಗ್ಗೇಯಕಾರ ಶ್ರೀಮುತ್ತುಸ್ವಾಮಿ ದೀಕ್ಷಿತರ ಶ್ರೀ ಮಹಾಗಣಪತಿಯ ನಾದಾರಾಧನೆ.
ಚಿದಾನಂದ ಸ್ವರೂಪಿಯಾದ ಶ್ರೀ ಮಹಾಗಣಪತಿಯ ಆರಾಧನ ರೂಪದಂತೆ ಕರ್ನಾಟಕ ಸಂಗೀತದ ಲ್ಲಿ ಅವನ ಪ್ರಸಿದ್ಧಿಗೆ ತಕ್ಕಂತೆ ಹತ್ತು ಹಲವು ಕೃತಿಗಳಿವೆ. ಪುರಂದರದಾಸ, ಕನಕದಾಸರಾದಿಯಾಗಿ ಹೆಚ್ಚಿನ ಎಲ್ಲಾ ಹರಿದಾಸರು ಗಣಪತಿಯನ್ನು ಹಾಡಿ ಹೊಗಳಿ ಕೃತಿ ರಚಿಸಿದವನ್ಢ್ಜಿ. ಕರ್ನಾಟಕ ಸಂಗೀತದಲ್ಲಿ ಮೊದಲ ಪಾಠವಾಗಿ ಕಲಿಸುವುದು ‘ಶ್ರೀಗಣನಾಥ ಸಿಂಧೂರಾ ವರ್ಣ’ ( ರಾಗ: ಮಲಹರಿ ; ತಾಳ: ರೂಪಕತಾಳ) ಎಂಬ ಪುರಂದರದಾಸರ ಕೃತಿಯನ್ನು. ಇದಲ್ಲದೆ ದೇವರನಾಮವಾಗಿ ಹಂಸಧ್ವನಿ ರಾಗದ ‘ಗಜವದನಾ ಬೇಡುವೆ ಗೌರೀತನಯ’, ನಾಟರಾಗದ ‘ಶರಣು ಸಿದ್ಧಿವಿನಾಯಕ’, ‘ನಮ್ಮಮ್ಮ ಶಾರದೆ ಉಮಾಮಹೇಶ್ವರಿ’ ಮುಂತಾದ ಕೃತಿಗಳನ್ನು ಹಾಡುವ ಪರಿಪಾಠವಿದೆ.
ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದೇ ಪ್ರಸಿದ್ಧರಾದ ಶ್ಯಾಮಾಶಾಸ್ತ್ರಿಗಳು, ತ್ಯಾಗರಾಜರು, ಮತ್ತು ಮುತ್ತುಸ್ವಾಮಿ ದೀಕ್ಷಿತರಲ್ಲಿ, ಶ್ಯಾಮಾಶಾಸ್ತ್ರಿಗಳ ಯಾವುದೇ ಗಣಪತಿಪರ ಕೃತಿ ಲಭ್ಯವಾಗಿಲ್ಲ. ತ್ಯಾಗರಾಜರು ಸೌರಾಷ್ಟ್ರ ರಾಗದಲ್ಲಿ ‘ಶ್ರೀ ಗಣಪತಿನಿ ಸೇವಿಂಪರಾ’ ಹಾಗೂ ಬಂಗಾಳ ರಾಗದಲ್ಲಿ ‘ಗಿರಿರಾಜ ಸುತಾತನಯ’ ಎಂಬ ಅಪೂರ್ವವಾದ ಕೃತಿ ರಚನೆ ಮಾಡಿದ್ದಾರೆ. ಈ ಕೃತಿಯ ಸೌಂದರ್ಯವನ್ನು ಕೇಳಿಯೇ ಆಸ್ವಾದಿಸಬೇಕು.
ಇನ್ನುಳಿದವರಲ್ಲಿ ಮುತ್ತುಸ್ವಾಮಿ ದೀಕ್ಷಿತರು ಗಾಣಪತ್ಯ ಶಾಸ್ತ್ರದಲ್ಲಿ ನಿಸ್ಸೀಮರು. ಬಹುಶ: ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಮಹಾಗಣಪತಿಯ ಕುರಿತು ಇದುವರೆಗೆ ಯಾರೂ ಮಾಡದಷ್ಟು ಅಂದರೆ ಸುಮಾರು ಇಪ್ಪತ್ತೊಂಬತ್ತು ಕೃತಿ ರಚನೆ ಮಾಡಿದ್ದಾರೆ. ಇದಲ್ಲದೆ ಗಣಪತಿಯನ್ನು ಕುರಿತು ಇವರಷ್ಟು ವಿಶಿಷ್ಟವಾಗಿ, ವಿಸ್ತಾರವಾಗಿ, ವಿಶೇಷವಾಗಿಯೂ ಯಾವ ವಾಗ್ಗೇಯಕಾರರು ಕೃತಿ ರಚಿಸಿಲ್ಲ.
ಸಾಮಾನ್ಯವಾಗಿ ದೀಕ್ಷಿತರ ಬಗ್ಗೆ ಯಾರಿಗೂ ಹೆಚ್ಚು ಗೊತ್ತಿರಲಿಕ್ಕಿಲ್ಲ. ಆದರೆ ಅವರ ರಚನೆಗಳಲ್ಲಿ ಜಗತ್ಪ್ರಸಿದ್ಧವಾದ ಹಂಸಧ್ವನಿ ರಾಗದ ‘ವಾತಾಪಿ ಗಣಪತಿಂ ಭಜೇಹಂ’ ಹಾಗೂ ನಾಟ ರಾಗದ ‘ಮಹಾಗಣಪತಿಂ ಮನಸಾ ಸ್ಮರಾಮಿ’ ಎಂಬ ಕೃತಿಗಳನ್ನು ಯಾರೂ ಕೇಳದೆ ಇರಲಿಕ್ಕಿಲ್ಲ.
ಮುತ್ತುಸ್ವಾಮಿ ದೀಕ್ಷಿತರ ಗಣಪತಿಪರ ಕೃತಿಗಳನ್ನು ಸಾಹಿತ್ಯ ಮತ್ತು ಸಂಗೀತದ ದೃಷ್ಟಿಯಿಂದ ನೋಡಿದರೆ ಪ್ರಗಲ್ಭ ಪಾಂಡಿತ್ಯಪೂರ್ಣವಾಗಿ ರಚನೆಗೊಂಡಿದ್ದು. ಒಂದೊಂದು ಕೃತಿಯೂ ಒಂದೊಂದು ಅನುಭವವನ್ನು ಕೊಡುವಂಥಹ ಸಾಮಥ್ರ್ಯವುಳ್ಳದ್ದಾಗಿದೆ. ಅಪೂರ್ವವಾದ ಪದಪುಂಜಗಳು, ಗಣಪತಿಯ ಘನ ವಿಶೇಷತೆಗಳನ್ನು ಸಾರುವ ರಚನಾ ಕೌಶಲ್ಯ, ಸೂಕ್ತವಾದ ರಾಗಗಳ ಆಯ್ಕೆ ಮುಂತಾದವುಗಳಿಂದ ಮಿಕ್ಕ ವಾಗ್ಗೇಯಕಾರರ ಗಣಪತಿ ಕೃತಿಗಳಿಗಿಂತ ವಿಭಿನ್ನವಾಗಿ ದೀಕ್ಷಿತರ ರಚನೆಗಳಿಗೆ ಅವರ ರಚನೆಗಳೇ ಸಾಟಿ ಎಂಬಂತಿವೆ.
ಮುತ್ತುಸ್ವಾಮಿ ದೀಕ್ಷಿತರ ಗಣಪತಿ ಪರಕೃತಿಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಷೋಡಶ ಗಣಪತಿ ಕೃತಿಗಳು. ಇವು ಹದಿನಾರು ಗಣಪತಿ ಕೃತಿಗಳ ಒಂದು ಗುಚ್ಛ. ಇದನ್ನು ಸಮುದಾಯ ಕೃತಿಗಳೆಂದೂ ಕರೆಯುತ್ತಾರೆ. ಇವು ತಿರುವಾರೂರಿನ ಶ್ರೀತ್ಯಾಗರಾಜ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿರುವ 16 ಗಣಪತಿ ಮೂರ್ತಿಗಳ ಕುರಿತ ರಚನೆ. ಆಗಮಗಳ ಪ್ರಕಾರ ಗಣಪತಿಯ ಸ್ವರೂಪ ಹದಿನಾರು. ಪ್ರತಿಯೊಂದಕ್ಕೂ ಪ್ರತ್ಯೇಕ ಹೆಸರು, ಪೂಜಾವಿಧಿಗಳು ಹಾಗೂ ಪ್ರತ್ಯೇಕವಾದ ಮಂತ್ರ ಮತ್ತು ತಂತ್ರಗಳಿವೆ. ಇದಲ್ಲದೆ ಉಳಿದ ಗಣಪತಿ ಕೃತಿಗಳು ಸೇರಿ ಇಪ್ಪತ್ತೊಂಬತ್ತರಷ್ಟು ಕೃತಿ ರಚಿಸಿದ್ದಾರೆ.

ಅವುಗಳ ವಿವರ ಹೀಗಿವೆ:
ಕೃತಿ
|
ರಾಗ
|
ತಾಳ
| |
1
|
ವಾತಾಪಿ ಗಣಪತಿಂ ಭಜೇಹಂ
|
ಹಂಸಧ್ವನಿ
|
ಆದಿತಾಳ
|
2
|
ಮಹಾಗಣಪತೇ ಪಾಲಯಾಶುಮಾಂ
|
ನಟನಾರಾಯಣಿ
|
ಆದಿತಾಳ
|
3
|
ಪಂಚಮಾತಂಗಮುಖ ಗಣಪತಿನಾ ಪರಿಪಾಲಿತೋ ಹಂ
|
ಮಲಹರಿ
|
ರೂಪಕತಾಳ
|
4
|
ಶ್ರೀ ಮೂಲಾಧಾರಚಕ್ರ ವಿನಾಯಕ
|
ಶ್ರೀ
|
ಆದಿತಾಳ
|
5
|
ಶಕ್ತಿಸಹಿತ ಗಣಪತಿಂ
|
ಶಂಕರಾಭರಣ
|
ತ್ರಿಶ್ಯ ಏಕತಾಳ
|
6
|
ಉಚ್ಛಿಷ್ಟ ಗಣಪತೌ ಭಕ್ತಿಂ
|
ಕಾಶಿರಾಮಕ್ರಿಯೆ
|
ಆದಿತಾಳ
|
7
|
ಗಣನಾಯಕಂ ಭಜೇಹಂ ಭಜೇ
|
ಪೂರ್ಣಷಡ್ಜ
|
ಆದಿತಾಳ
|
8
|
ಶ್ವೇತಗಣಪತಿಂ ವಂದೇ
|
ಚೂಡಾಮಣಿ
|
ತ್ರಿಪುಟತಾಳ
|
9
|
ರಕ್ತಗಣಪತಿಂ ಭಜೇಹಂ
|
ಮೋಹನ
|
ಆದಿತಾಳ
|
10
|
ಗಣರಾಜೇನ ರಕ್ಷಿತೋಹಂ
|
ಆರಭಿ
|
ಮಿಶ್ರಛಾಪುತಾಳ
|
11
|
ಗಜಾನನಯುತಂ ಗಣೇಶ್ವರಂ
|
ಚಕ್ರವಾಕ
|
ಆದಿತಾಳ
|
12
|
ವಲ್ಲಭ ನಾಯಕಸ್ಯ ಭಕ್ತೋ ಭವಾಮಿ
|
ಬೇಗಡೆ
|
ರೂಪಕತಾಳ
|
13
|
ಲಂಬೋದರಾಯ ನಮಸ್ತೇ ಶ್ರೀ
|
ವರಾಳಿ
|
ಖಂಡಛಾಪುತಾಳ
|
14
|
ಶ್ರೀ ಗಣನಾಥಂ ಭಜರೇ ಚಿತ್ತ ಪರಾಶಕ್ತಿಯುತಂ
|
ಈಶ ಮನೋಹರಿ
|
ರೂಪಕತಾಳ
|
15
|
ಹಸ್ತಿ ವದನಾಯ ನಮಸ್ತುಭ್ಯಂ
|
ನವರೋಜ್
|
ಮಿಶ್ರಛಾಪುತಾಳ
|
16
|
ಸಿದ್ಧಿವಿನಾಯಕಂ ಅನಿಶಂ ಚಿಂತಯಾಮ್ಯಹಂ
|
ಷಣ್ಮುಖ ಪ್ರಿಯ
|
ರೂಪಕತಾಳ
|
17
|
ಕರಿಕಳಭ ಮುಖಂ ಢುಂಡಿ ಗಣೇಶಂ
|
ಸಾವೇರಿ
|
ರೂಪಕತಾಳ
|
18
|
ಗಣೇಶ ಕುಮಾರ ಪಾಹಿಮಾಂ ಗಜಮುಖ
|
ಜಂಜೂಟಿ
|
ಏಕತಾಳ
|
19
|
ಶ್ರೀ ಮಹಾಗಣಪತಿಂ ರವತುಮಾಂ
|
ಗೌಳ
|
ಮಿಶ್ರಛಾಪುತಾಳ
|
20
|
ಏಕದಂತಂ ಭಜೇಹಂ ಏಕಾನೇಕ ಫಲಪ್ರದಂ
|
ಬಿಲಹರಿ
|
ಮಿಶ್ರಛಾಪುತಾಳ
|
21
|
ಶ್ರೀ ಗಣೇಶಾತ್ಪರಂ ಚಿತ್ತ ನಹಿರೇರೇ
|
ಆದ್ರ್ರದೇಶಿ
|
ರೂಪಕತಾಳ
|
22
|
ರುದ್ರಕೋಪಜಾತ
|
ರುದ್ರಪ್ರಿಯ
|
?
|
23
|
ಮಹಾಗಣಪತಿ ವಂದೇ
|
ತೋಡಿ
|
ತ್ರಿಶ್ಯ ಏಕತಾಳ
|
24
|
ಮಹಾಗಣಪತಿ ಮನಸಾಸ್ಮರಾಮಿ
|
ನಾಟ
|
ಏಕತಾಳ
|
25
|
ಹೇರಂಭಾಯ ನಮಸ್ತೇ
|
ಅಠಾಣ
|
ರೂಪಕತಾಳ
|
26
|
ವಿಘ್ನೇಶ್ವರಂ
|
ಮಲಹರಿ
|
?
|
27
|
ವಿನಾಯಕಂ ವಿಘ್ನೇಶ್ವರಂ
|
ಚಕ್ರವಾಕ
|
ರೂಪಕತಾಳ
|
28
|
ವಾಮಾಂಕಸ್ಥಿತಾಯಾ ವಲ್ಲಭಯಾಶ್ಲಿಷ್ಟಂ
|
ಅಠಾಣ
|
ಏಕತಾಳ
|
29
|
ಗಣಪತೇ ಮಹಾಮತೇ
|
ಕಲ್ಯಾಣಿ
|
ರೂಪಕತಾಳ
|
ದೀಕ್ಷಿತರ ಗಣಪತಿ ಕೃತಿಗಳಲ್ಲಿ ಅವನ ವಿವಿಧ ಸ್ವರೂಪಗಳ ದರ್ಶನವಾಗುತ್ತದೆ. ಮಹಾಗಣಪತಿಯು ತನ್ನ ಮಾತಾ-ಪಿತರಂತೆ ನಾಟ್ಯಪ್ರಿಯ. ಹಾಗಾಗಿಯೇ ಏನೋ ದೀಕ್ಷಿತರು ಗೌಳರಾಗದ ‘ಶ್ರೀ ಮಹಾಗಣಪತಿರವತುಮಾಂ’ಹಾಗೂ ಬೇಗಡೆ ರಾಗದ ‘ವಲ್ಲಭ ನಾಯಕಸ್ಯ’ ಎಂಬ ಕೃತಿಗಳನ್ನು ನರ್ತನ ಗಣಪತಿಗಾಗಿಯೇ ರಚಿಸಿದ್ದಾರೆ. ಅದರಲ್ಲೂ ಶ್ರೀಮಹಾಗಣ ಪತಿಂ ರವತುಮಾಂ ಕೃತಿಯಂತೂ ವಿಳಂಬ ಲಯದಲ್ಲಿದ್ದು ನರ್ತನೆಯ ಭಾವಕ್ಕೆ ಸರಿಯಾಗಿ ಜೋಡಿಸಿದ ಶೋಲ್ಕಟ್ಟು ಸ್ವರಗಳು ಅತಿವೇಗ ಗತಿಯಲ್ಲಿದ್ದು ಮೃದಂಗದ ಜತಿಗಳಾದ ತಝಂ ಕಿಟತೋಂ ಕುಕುಂದರಿ ಕಿಟತಝಂ ಮುಂತಾದ ವಿಶೇಷ ರಚನೆಗಳಿಂದ ಕೂಡಿ ಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ ಹಾಗೂ ನೃತ್ಯೋಚಿತವಾಗಿದೆ.
ಷಣ್ಮಖಪ್ರಿಯ ರಾಗದ ‘ಸಿದ್ಧಿವಿನಾಯಕಂ ಅನಿಶಂ ಚಿಂತಯಾಮ್ಯಹಂ’ ಕೃತಿಯು ವಿಶೇಷವಾಗಿ ವರಸಿದ್ಧಿ ವಿನಾಯಕ ವೃತಕ್ಕೆ ಸಂಬಂಧಿಸಿದ್ದು. ಈ ವೃತವನ್ನು ಭಾದ್ರಪದ ಮಾಸದಲ್ಲಿ ಬರುವ ವಿನಾಯಕ ಚತುರ್ಥಿಯಂದು ಮಾಡತಕ್ಕದ್ದು ಹಾಗಾಗಿ ವಿನಾಯಕ ಚತುರ್ಥಿ ಯಾವಾಗ ಬರುತ್ತದೆ ಬಹಳ ಚಮತ್ಕಾರವಾಗಿ ಭಾದ್ರಪದಮಾಸ ಚತುಥ್ರ್ಯಾಂ ಎಂದು ಚರಣದ ಸಾಹಿತ್ಯದಲ್ಲಿ ನಮೂದಿಸಿದ್ದಾರೆ. ಹಾಗೆಯೇ ರಕ್ತಗಣಪತಿ ಹಾಗೂ ಶ್ವೇತಗಣಪತಿ ಕುರಿತು ಕೃತಿರಚಿಸಿದ್ದಾರೆ. ಶ್ರೀರಾಗದ ‘ಶ್ರೀಮೂಲಾಧಾರಚಕ್ರ ವಿನಾಯಕ’ ಕೃತಿಯಲ್ಲಿ ಷಟ್ ಚಕ್ರದಲ್ಲಿ ಒಂದಾದ ಮೂಲಾಧಾರ ಚಕ್ರದಲ್ಲಿ ನೆಲೆಸಿರುವ ವಿನಾಯಕನ ಕುರಿತು ಕೃತಿ ರಚಿಸಿದ್ದಾರೆ.
ಇದೆಲ್ಲಕ್ಕಿಂತಲೂ ವಿಶೇಷವಾಗಿ ದೀಕ್ಷಿತರು ಉಚ್ಛಿಷ್ಟ ಗಣಪತಿಯ ಮೇಲಿನ ಕೃತಿ. ಇಲ್ಲಿ ತಾಂತ್ರಿಕ ಪೂಜಾ ಪದ್ಧತಿಯ ಪ್ರಕಾರದ ವಾಮಾಚಾರ ಲಕ್ಷಣಗಳು ಕಾಣುತ್ತದೆ. ಕೆಲವೊಂದು ಆಧಾರಗಳ ಪ್ರಕಾರ ಬಹುಶ: ಆದಿಗುರು ಶ್ರೀಶಂಕರಾಚಾರ್ಯರಿಂದ ಭಾಗಶ:ವಾಗಿ ನಿರ್ಮೂಲ ಗೊಂಡ ತಾಮಸಿಕ ಉಪಾಸನಾ ಪದ್ಧತಿಯನ್ನು ಬ್ರಾಹ್ಮಣರೂ, ಮಹಾವಿರಕ್ತಿಗಳೂ ಆದ ದೀಕ್ಷಿತರು ಯಾಕೆ ಕೈಬಿಡಲಿಲ್ಲವೋ ಗೊತ್ತಿಲ್ಲ. ಹಾಗಾಗಿ ಸಾತ್ವಿಕ ರೀತಿಯ ಪೂಜಾ ಪದ್ಧತಿಯೊಂದಿಗೆ ತಾಮಸಿಕ ರೀತಿಯ ಉಪಾಸನೆಯನ್ನೂ ದೀಕ್ಷಿತರು ಒಪ್ಪುತ್ತಿದ್ದರು ಎಂಬುವುದಕ್ಕೆ ದೀಕ್ಷಿತರ ಉಚ್ಛಿಷ್ಟ ಗಣಪತಿಯ ಕೃತಿ ಹಾಗೂ ಕೆಲವೊಂದು ದೇವಿಕೃತಿಗಳಲ್ಲಿ ಕಂಡುಬರುವ ವಾಮಾಚಾರ ಪೂಜಾಲಕ್ಷಣಗಳೇ ಸಾಕ್ಷಿ.
ಅದೇನೇ ಇರಲಿ ನಾದವೇ ಪ್ರಧಾನವಾಗಿರುವ ದೀಕ್ಷಿತರ ಕೃತಿಗಳು ಕೇಳುಗರ ಹೃದಯದಲ್ಲಿ ಅವ್ಯಕ್ತವಾ ದ ಅನಂತ ಆನಂದವನ್ನುಂಟು ಮಾಡುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಹಾಗೆಯೇ ದೀಕ್ಷಿತರ ಕೃತಿಗಳು ಕೇಳಲು ಎಷ್ಟು ಸೊಗಸೋ ಹಾಡಲು ಅಷ್ಟೇ ಕ್ಲಿಷ್ಟ. ಸಂಗೀತಗಾರರಿಗೆ ಸವಾಲು ಹಾಕುವಂತಿವೆ. ಸಂಗೀತ ವಿದ್ವಾಂಸರ ಪ್ರಕಾರ ತ್ಯಾಗರಾಜರ ಕೃತಿಗಳು ದ್ರಾಕ್ಷಿಯನ್ನು ತಿಂದ ಹಾಗೆ. ಅದರ ಹೊರ ಮತ್ತು ಒಳಭಾಗ ಎರಡೂ ಸಿಹಿ ಹಾಗೂ ತಿನ್ನಲೂ ಸುಲಭ ಹಾಗಾಗಿ ದ್ರಾಕ್ಷಾ ಪಾಕಕ್ಕೆ ಹೋಲಿಸಿದರೆ. ದೀಕ್ಷಿತರ ಕೃತಿಗಳು ಸಿಹಿನೀರುಳ್ಳ ತೆಂಗಿನಕಾಯಿಯ ಚಿಪ್ಪನ್ನು ಒಡೆದೇ ಅದರ ಸವಿಯನ್ನು ಸವಿಯುವಷ್ಟೇ ಕಷ್ಟ ಅಂದರೆ ನಾರಿಕೇಳಪಾಕಕ್ಕೆ ಹೋಲಿಸಿದ್ದಾರೆ. ತ್ಯಾಗರಾಜರ ಕೃತಿಗಳು ಮಧ್ಯಮಕಾಲದಲ್ಲಿದ್ದು ಹಾಡಲು ಸುಲಭ. ದೀಕ್ಷಿತರದ್ದು ವಿಲಂಬಲಯದಲ್ಲಿದ್ದು ಸ್ಪಷ್ಟ ಉಚ್ಛಾರ, ಶುದ್ಧ ಶಾರೀರ ಹಾಗೂ ಶ್ವಾಸಸಿದ್ಧಿಯುಳ್ಳವರು ಮಾತ್ರ ಹಾಡಲು ಶಕ್ತರು ಎಂಬುವುದು ವಿದ್ವಾಂಸರ ಅಭಿಪ್ರಾಯ.
ದೀಕ್ಷಿತರು ಗಣಪತಿಯ ಕುರಿತು ಎರಡು ಮೂರು ಕಚೇರಿಗಾಗುವಷ್ಟು ಕೃತಿ ರಚಿಸಿದ್ದರೂ ಇಂದು ನಾವು ಕೇವಲ ಬೆರಳೆಣಿಕೆಯಷ್ಟು ಕೃತಿಗಳನ್ನು ಮಾತ್ರ ಕಚೇರಿಗಳಲ್ಲಿ ಕೇಳುತ್ತಿದ್ದೇವೆ. ಈ ಕಾರಣದಿಂದಾಗಿ ಮುಂದಾದರೂ ಯುವಕಲಾವಿದರು ದೀಕ್ಷಿತರ ಉಳಿದ ಕೃತಿಗಳ ಕಡೆಗೆ ಗಮನಹರಿಸಿ ಕಚೇರಿಗಳಲ್ಲಿ ಪ್ರಸ್ತುತ ಪಡಿಸಿದರೆ ಆ ನಾದಯೋಗಿಯ ನಾದಸಾಧನೆಗೆ ಫಲದೊರಕಿದಂತೆ.
ಆಧಾರ ಗ್ರಂಥಗಳು
ಗಾನಕಲೆ - ರಾಳಪಲ್ಲಿ ಅನಂತ ಕೃಷ್ಣ ಶರ್ಮಾ
ಮುತ್ತುಸ್ವಾಮಿ ದೀಕ್ಷಿತರ ಸಾಹಿತ್ಯ ಮಂಜರಿ - ವಿದ್ವಾನ್ ಮಿತ್ತೂರು ಶಂಕರ ಮೂರ್ತಿ
ಈಸಬೇಕು ಇದ್ದು ಜಯಿಸಬೇಕು - ವಿದ್ವಾನ್ ನಂಜುಂಡ ಸ್ವಾಮಿ
ಶ್ರೀಸಾಮಾನ್ಯರಿಗೆ ಶ್ರೀಚಕ್ರ ದರ್ಶನ - ವಿದ್ವಾನ್ ವಿ. ನಂಜುಂಡ ಸ್ವಾಮಿ
ತಾರೀಕು 29 ಆಗಸ್ಟ್ 2014ರ ವಿನಾಯಕ ಚತುರ್ಥಿಯಂದು ಉದಯವಾಣಿಯಲ್ಲಿ ಪ್ರಕಟಗೊಂಡ ಲೇಖನ

No comments:
Post a Comment